ನೋಡಲು ಸಖತ್ ಲುಕ್, ಪ್ರಯಾಣದ ಅನುಭವವೂ ಸೂಪರ್… ಗ್ರಾಮೀಣ ಭಾಗದಲ್ಲಿ ಸಂಚರಿಸಲು TVS NTORQ 125 ಕೂಡಾ ಹೇಳಿ ಮಾಡಿಸಿದಂತಹ ಸ್ಕೂಟರ್… ಕಡಿಮೆ ಬೆಲೆಯಲ್ಲಿ ಅದ್ಭುತ ಸ್ಕೂಟರ್ ಅನ್ನು ಖರೀದಿಸಲು ನೀವು ಬಯಸಿದರೆ TVS NTORQ 125 ನಿಮಗೆ ಉತ್ತಮ ಆಯ್ಕೆ…
ಟಿವಿಎಸ್ ಮೋಟಾರ್ ಕಂಪನಿಯ ಮತ್ತೊಂದು ಅದ್ಭುತ ದ್ವಿಚಕ್ರ ವಾಹನವಿದು.
TVS NTORQ 125 ಐದು ರೂಪಾಂತರ…!
TVS NTORQ 125 ಐದು ರೂಪಾಂತರದಲ್ಲಿ ಸಿಗುತ್ತದೆ. ಇದರ ನಾಲ್ಕು ರೂಪಾಂತರದ ಎಕ್ಸ್ ಶೋರೂಮ್ ಬೆಲೆ ಒಂದು ಲಕ್ಷ ರೂಪಾಯಿಯನ್ನೂ ದಾಟುವುದಿಲ್ಲ ಎಂದರೆ ನೀವು ನಂಬಲೇಬೇಕು…! ಟಾಪ್ ಅಫ್ ಲೈನ್ ಮಾಡೆಲ್ ಎಕ್ಸ್ ಟಿಯ ಬೆಲೆ ಮಾತ್ರ ಒಂದು ಲಕ್ಷ ರೂಪಾಯಿ ದಾಟುತ್ತದೆ. ಇಲ್ಲಿದೆ ನೋಡಿ ಬೆಲೆಯ ಪಟ್ಟಿ
- TVS NTORQ 125 ಡ್ರಮ್ : 87,271 ರೂಪಾಯಿ
- TVS NTORQ 125 ಡಿಸ್ಕ್ : 92,376 ರೂಪಾಯಿ
- TVS NTORQ 125 ರೇಸ್ ಆವೃತ್ತಿ : 96,426 ರೂಪಾಯಿ
- TVS NTORQ 125 ಸೂಪರ್ ಸ್ಕ್ವಾಡ್ ಆವೃತ್ತಿ : 98,426 ರೂಪಾಯಿ
- TVS NTORQ 125 ರೇಸ್ ಎಕ್ಸ್ ಪಿ : 99,976 ರೂಪಾಯಿ
- TVS NTORQ 125 ಎಕ್ಸ್ ಟಿ : 1,07,926 ರೂಪಾಯಿ
- TVS NTORQ 125 ಶಕ್ತಿಶಾಲಿ ಎಂಜಿನ್
TVS NTORQ 125 ದ್ವಿಚಕ್ರ ವಾಹನ ನಿಮ್ಮ ಸವಾರಿಯನ್ನು ಅದ್ಭುತವನ್ನಾಗಿಸುವ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ. ಈ ದ್ವಿಚಕ್ರ ವಾಹನ ಶಕ್ತಿ ಪಡೆಯುವುದು 124.8 ಸಿಸಿ (3 ವಿ), ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಎಸ್ ಐ, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‍ನಿಂದ. ಈ ಎಂಜಿನ್ 7000 ಆರ್ ಪಿ ಎಂ ನಲ್ಲಿ 7 ಕೆವಿ ಗರಿಷ್ಠ ಶಕ್ತಿ ಹಾಗೂ 5500 ಆರ್ ಪಿ ಎಂನಲ್ಲಿ 10.6 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಸ್ಕೂಟರ್ ನ ಟಾಪ್ ಸ್ಪೀಡ್ ಗಂಟೆಗೆ 95 ಕಿಲೋಮೀಟರ್. ಇದು 9 ಸೆಕೆಂಡಿನಲ್ಲಿ 0-60 ಸ್ಪೀಡ್ ಪಡೆಯುತ್ತದೆ.
Read This: TVS Jupiter 110 CC: ನಗರ, ಗ್ರಾಮೀಣ ಪ್ರದೇಶದ ಜನರ ಸವಾರಿಯ ಆನಂದ ಅದ್ಭುತ ಮಾಡುತ್ತದೆ
ಇದು TVS SmartXonnect ಜೊತೆಗೆ ಸಂಪರ್ಕ ಹೊಂದಿರುತ್ತದೆ. ಹೀಗಾಗಿ ಸುಧಾರಿತ ಸಂಪರ್ಕಿತ ತಂತ್ರಜ್ಞಾನದೊಂದಿಗೆ TVS NTORQ 125 ಸ್ಕೂಟರ್ ನಲ್ಲಿ ನೀವು ಚಲಿಸುವಾಗಲೂ ತಂತ್ರಜ್ಞಾನದ ಪ್ರಪಂಚದೊಂದಿಗೆ ಸಂಪರ್ಕ ಹೊಂದಿರುತ್ತೀರಿ. ಇದು ಅದ್ಭುತ ಹಾಗೂ ಮನಸ್ಸಿಗೆ ಮುದ ನೀಡುವ ವೈಶಿಷ್ಟ್ಯಗಳ ಜಗತ್ತನ್ನು ಅನಾವರಣಗೊಳಿಸುತ್ತದೆ.
ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ…
ಇಎಂಐ ಇದೆಯೇ?: ಹೌದು, ಆಯ್ದ ಕ್ರೆಡಿಟ್ ಕಾರ್ಡ್‍ಗಳು ಮತ್ತು ಬ್ಯಾಂಕ್‍ಗಳಿಗೆ ಇಎಂಐ ಯೋಜನೆಗಳು ಲಭ್ಯವಿವೆ. ಇವುಗಳ ಬಗ್ಗೆ ನೀವು ನಿಮ್ಮ ಹತ್ತಿರದ ಡೀಲರ್ ಶಿಪ್‍ಗಳಲ್ಲಿ ವಿಚಾರಿಸಬೇಕು
ಬಣ್ಣಗಳು
TVS NTORQ 125 ವಿವಿಧ ರೂಪಾಂತರಗಳೊಂದಿಗೆ ಒಟ್ಟು 8 ಬಣ್ಣಗಳಲ್ಲಿ ಲಭ್ಯವಿದೆ. ಹೀಗಾಗಿ ನಿಮಗೆ ಆಸಕ್ತಿಯ ಸ್ಕೂಟರ್ ಅನ್ನು ಖರೀದಿಸಿ ಮನೆಗೆ ಕೊಂಡೊಯ್ಯಬಹುದು.
ಮೈಲೇಜ್
- Ntorq 125 XP ನ ಮೈಲೇಜ್ ಸರಿಸುಮಾರು 54.33 kmpl
ಇಂಧನ ಟ್ಯಾಂಕ್
- ಇದು 5.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ
ತೂಕ ಎಷ್ಟು…?
- ಈ ಸ್ಕೂಟರ್ ನ ತೂಕ 110 ಕೆ.ಜಿ ಯಿಂದ 118 ಕೆ.ಜಿ
ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.